logo
WhatsApp Image 2026-04-02 at 14.46.04.jpeg
hindalco everlast.jpeg

Big breaking News::: ಪಿಲಿಕುಳದ ಹನುಮಾನ್ ಲಂಗೂರ್ “ರಾಜು” ಇನ್ನಿಲ್ಲ

ಟ್ರೆಂಡಿಂಗ್
share whatsappshare facebookshare telegram
5 Oct 2021
post image

ಪಿಲಿಕುಳದ ಹನುಮಾನ್ ಲಂಗೂರ್ “ರಾಜು” ಇನ್ನಿಲ್ಲ ಪಿಲಿಕುಳ ಜೈವಿಕ ಉದ್ಯಾನವನದ 21 ವರ್ಷ ಪ್ರಾಯದ ಹನುಮಾನ್ ಲಂಗೂರ್ “ರಾಜು” ಇಂದು ಮೃತ ಪಟ್ಟಿದೆ. ಪಿಲಿಕುಳ ಮೃಗಾಲಯದ ಪ್ರಾರಂಭ ದಿನಗಳಲ್ಲಿ ರಾಜುವನ್ನು ಪಡುಬಿದ್ರೆಯ ಬಾರ್ ಒಂದರಿಂದ ರಕ್ಷಿಸಲಾಗಿತ್ತು. ಮಾಲಕ ಮತ್ತು ಗಿರಾಕಿಗಳಿಗೆ ಅತ್ಯಂತ ಪ್ರೀತಿ ಪಾತ್ರವಾಗಿದ್ದು “ರಾಜು” ಮದ್ಯಪಾನದ ಚಟ ಅಂಟಿಸಿಕೊಂಡು ಅನಾರೋಗ್ಯಕ್ಕೆ ಈಡಾಗಿತ್ತು.

ಆದರೆ ಪಿಲಿಕುಳ ಮೃಗಾಲಯದಲ್ಲಿ ನಿಧಾನವಾಗಿ ಅಮಲು ಸೇವನೆಯ ಅಭ್ಯಾಸವನ್ನು ಬಿಡಿಸಿ ವಿವಿದ ಜಾತಿಯ ಹಣ್ಣು ಹಂಪಲುಗಳನ್ನು ಸೇವಿಸಲು ಒಗ್ಗಿಕೊಂಡಿತ್ತು ಮತ್ತು ಮೃಗಾಲಯದ ಸಂದರ್ಷಕರಿಗೆ ಬಹಳ ಆಕರ್ಷಕವಾಗಿ ಪ್ರೀತಿಪಾತ್ರವಾಗಿತ್ತು.

ಲಂಗೂರ್
ನೇಪಾಳ, ಶ್ರೀಲಂಕಾ. ಭಾರತದ ಕೆಲವು ಭಾಗಗಳಲ್ಲಿ ಕಾಣ ಸಿಗುತ್ತವೆ .ಈ ಕೋತಿಗಳ ಗಮನಾರ್ಹ ಲಕ್ಷಣವೆಂದರೆ ಮೂರು ಕೋಣೆಗಳ ಹೊಟ್ಟೆ ಹೊಂದಿರುವ ಪ್ರಾಣಿ .ಕೋತಿಯ ಮುಖವು ದುಂಡಾಗಿರುತ್ತದೆ, ಮುಂಭಾಗವು ಚಿಕ್ಕದಾಗಿದೆ, ಮೂಗು ಮುಖವನ್ನು ಮೀರಿ ಚಾಚಿಕೊಂಡಿಲ್ಲ. ಲಂಗೂರ್‌ನ ಬಾಲ ಮತ್ತು ಕೈಕಾಲುಗಳು ತೆಳ್ಳಗಿರುತ್ತವೆ, ಆದಾಗ್ಯೂ, ಅವು ಶಕ್ತಿ ಮತ್ತು ಸ್ಥಿರತೆಯಲ್ಲಿ ಭಿನ್ನವಾಗಿರುತ್ತವೆ. ಸಾಕಷ್ಟು ಉದ್ದವಾದ ಪಂಜಗಳ ಜೊತೆಗೆ, ಉದ್ದವಾದ ಬೆರಳುಗಳನ್ನು ಕಂಡುಹಿಡಿಯಬಹುದು, ಅವುಗಳಲ್ಲಿ ಮಾತ್ರ ಮೊದಲನೆಯದು ಇತರರಿಗಿಂತ ಕಡಿಮೆ.

ಪಿಲಿಕುಳ ದಲ್ಲಿ ಲಂಗೂರ್ಗಳು ಎಷ್ಟಿವೆ? ಈಗ ಪ್ರಸ್ತುತ ಪಿಲಿಕುಳ ಮೃಗಾಲಯದಲ್ಲಿ ನಾಲ್ಕು ಹನುಮಾನ್ ಲಂಗೂರ್ ಗಳಿದ್ದು ಅವುಗಳಿಗಾಗಿ ವಿಶಾಲವಾದ ತೆರೆದ ಮರಮಟ್ಟುಗಳಿಂದ ಕೂಡಿದ ಆವರಣವನ್ನು ನಿರ್ಮಿಸಲಾಗಿದೆ. ಹನುಮಾನ್ ಲಂಗೂರ್ ಗಳ ಸಾಮಾನ್ಯ ಆಯಸ್ಸು 18-20 ವರ್ಷದವರೆಗೆ ಬದುಕುತ್ತವೆ ಎನ್ನುತ್ತಾರೆ. ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರಾದ ಹೆಚ್. ಜೆ. ಭಂಡಾರಿ

----ರಾಂ ಅಜೆಕಾರು ಕಾರ್ಕಳ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.